Saturday, January 19, 2019

ಶ್ರೀ ರಘುಪ್ರಿಯ ತೀರ್ಥರು

ಶಿವಮೊಗ್ಗ ಹಾಗೂ ಕೂಡಲಿಯಲ್ಲಿ ಶಿಥಿಲವಾದ ಮಠದ ಕಟ್ಟಡವನ್ನು ಸಂಪೂರ್ಣ ನವಿಕರಿಸಿದರು.


ಇಡೀ ಭಾರತದಾದ್ಯಂತ ಸಂಚಾರ ಮಾಡುತ್ತಾ ಮಧ್ವಮತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿದರು.

ಪ್ರತಿ ವರ್ಷವೂ ತಮ್ಮ ಗುರುಗಳ ಮಹಾ ಸಮಾರಾಧೆಯನ್ನು ಅತೀ ವಿಜೃಂಭಣೆಯಿಂದ ಮಾಡುತ್ತಿದ್ದರು. ಪಂಡಿತರ ಪೊಷಣೆ. ಅಲ್ಲಲ್ಲಿ ಇರುವ ಜ್ಞಾನ‌ಪಿಪಾಸುಗಳನ್ನು ಹುಡುಕಿ ಅವರಿಗೆ ಶ್ರೀಮನ್ಮಧ್ವಾಚಾರ್ಯರ ಗಂಥಗಳ ಪಾಠ.ಶ್ರವಣ,ಮನನ ಮಾಡಿಸುತ್ತಿದ್ದರು.

 ಇವರ ಒಂದು ವೈಷಿಷ್ಠ್ಯ ಅಂದರೆ ಶಿಷ್ಯರಿಗೆ ಪಾಠ ಹೆಳಿಕೊಟ್ಟು ಗ್ರಂಥದ ಮಂಗಳ ಮಾಡುವಾಗ ಪಾಠ ಓದಿದ ಪ್ರತಿಯೊಬ್ಬರಿಂದ ಕಡ್ಡಾಯವಾಗಿ ಅನುವಾದ ಮಾಡಿಸುತ್ತಿದ್ದರು.

ಅಪಾರ ಶಿಷ್ಯ ವಾತ್ಸಲ್ಯ , ಅಜಾತ ಶತ್ರಗಳು. ಶ್ರೀ ಸತ್ಯಪ್ರಮೋದ ತೀರ್ಥರ ಹಾಗೂ ಶ್ರೀ ಸತ್ಯಾತ್ಮ ತೀರ್ಥರ ಅತ್ಯಂತ ಪ್ರಿತಿಪಾತ್ರರಾಗಿದ್ದರು.

ಮುಂದೆ ತಮ್ಮ ಅತ್ಯಂತ ಪ್ರೀತಿಯ ಶಿಷ್ಯರಾದ ಶ್ರೀ ರಘುವಿಜಯ ತೀರ್ಥರಿಗೆ ಪಟ್ಟಾಭಿಷೇಕ ಮಾಡಿದರು.
ಇಂತಹ ಮಹಾನ ಚೇತನವು 9.1.2009 ಪುಷ್ಯ ತ್ರಯೊದಶಿ ಕೂಡಲಿ ಕ್ಷೇತ್ರದಲ್ಲಿ ವೃಂದಾವನಸ್ಥರಾದರು.

ಇಂದಿಗೂ ಅವರು ವೃಂದಾವನದಲ್ಲಿದ್ದು ಅನೇಕರಿಗೆ ಅನುಗ್ರಹ ಮಾಡುತ್ತಿದ್ದಾರೆ.
ಹಾಗೆಯೆ ಶ್ರೀ ರಘುವಿಜಯ ತೀರ್ಥರಲ್ಲಿದ್ದು ನಮಗೆ ನಿತ್ಯ ರಾಮ ದೇವರ ದರ್ಶನ ಪಾಠ ಸಜ್ಜನರ ಉದ್ದಾರ ಮಾಡಿಸುತ್ತಾದ್ದರೆ.

ಇಂತಹ ಮಹಾನ ತಪಸ್ವಿಗಳಾದ ಮಹಾಸ್ವಾಮಿಗಳು ನಮಗೆಲ್ಲರಿಗೂ ವಿಶೇಷವಾಗಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕೊಟ್ಟು ಉದ್ದಾರ ಮಾಡಿರೆಂದು  ಅವರ ಚರಣ ಕಮಲಗಳಿಗೆ ನಮಸ್ಕಾರ ಮಾಡಿ ಪ್ರಾಥಿಸೊಣ.

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...