राजीवनेत्र विदु-।
राजीव मामवतु ।
राजीवकेतनवशं ।।
वाजीभपत्तिनृप-।
राजीरथान्वितज-।
राजीवगर्वशमन ।।
वाजीशवाह सित-।
वाजीशदैत्यतनु-।
वाजीशभेदकरदो: ।।
जाजीकदम्बनव-।
राजीवमुख्यसुम-।
राजीसुवासितशिर: ।।
ರಾಜೀವನೇತ್ರ ವಿದು- |
ರಾಜೀವ ಮಾಮವತು |
ರಾಜೀವಕೇತನವಶಂ ||
ವಾಜೀಭಪತ್ತಿನೃಪ-|
ರಾಜೀರಥಾನ್ವಿತಜ-|
ರಾಜೀವಗರ್ವಶಮನ ||
ವಾಜೀಶವಾಹ ಸಿತ-|
ವಾಜೀಶದೈತ್ಯತನು-|
ವಾಜೀಶಭೇದಕರದೋಃ ||
ಜಾಜೀಕದಂಬನವ-|
ರಾಜೀವಮುಖ್ಯಸುಮ-|
ರಾಜೀಸುವಾಸಿತಶಿರಃ ||
rAjIvanEtra vidu- |
rAjIva mAmavatu |
rAjIvakEtanavasham ||
vAjIbhapattinrupa-|
rAjIrathAnvitaja- |
rAjIvagarvashamana ||
vAjIshavAha sita - |
vAjIshadaityatanu - |
vAjIshabhEdakaradOh ||
jAjIkadambanava- |
rAjIvamukhyasuma- |
rAjIsuvAsitashirah ||
पदच्छेद: पदपरिचयशास्त्रं च ।
ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ:-
Word Division & Etymology:
उपरि लिखितस्तोत्रस्य अधोलिखितपदानि सम्बोधनाविभक्तौ, पुल्लिङ्गे तथा एकवचने सन्ति ।
ಶ್ಲೋಕದಲ್ಲಿರುವ ಕೆಳಗಿನ ಪದಗಳು ಸಂಬೋಧನಾವಿಭಕ್ತಿ, ಪುಲ್ಲಿಂಗ ಏಕವಚನದಲ್ಲಿ ಇವೆ.
The below written words of the above verse are in Masculine gender, Singular and in Addressive case.
राजीवनेत्र - अकारान्त: ।
रासि जीवति इति राजीव: । राजीवौ इव नेत्रे यस्य स: राजीवनेत्र: ।
विदुराजीव - अकारान्त: ।
विदुरस्य आजीव: विदुराजीव: ।
वाजीभपत्तिनृपराजीरथान्वितजराजीवगर्वशमन - अकारान्त: ।
राजिनां रथ: राजिरथ: राजिरथे अन्वित: राजीरथान्वित: ।
वाजिन: च इभा: च पत्तय: च नृपा: च राजीरथान्विता: च वाजीभपत्तिनृपराजीरथान्विता: । जराया: जीव: या जरया जीवित: जराजीव: ।वाजीभपत्तिनृपराजीरथान्वित: च असौ जराजीव: च वाजीभपत्तिनृपराजीरथान्वितजराजीव: । जराजीवस्य गर्वं शमयते इति वाजीभपत्तिनृपराजीरथान्वितजराजीवगर्वशमन: ।
वाजीशवाह - अकारान्त: ।
वे जीयन्ति इति वाजिन: । वाजिनां ईश: वाजीश: । वाजीशेन वह्यते इति वाजीशवाह: ।
अथ श्लोकवर्तीनां अन्यपदानां परिचयं कुर्मः ।
ಈಗ ಶ್ಲೋಕದಲ್ಲಿರುವ ಇತರಪದಗಳ ಪರಿಚಯ ಮಾಡೋಣ.
Now we get the meaning of the other words of above verse.
माम् - त्रिषुलिङ्गेषुसमस्य दकारान्तस्य अस्मद् शब्दस्य षष्ठीविभक्ते: एकवचनान्तं पदमिदम् ।
अवतु - अव रक्षणे इति धातो: सकर्मकस्य कर्तरीप्रयोगस्य परस्मैपदिन: आज्नार्थे लोट् लकारस्य प्रथमपुरुषस्य एकवचनान्तं क्रियापदमिदम् ।
राजीवकेतनवशम् - अकारान्तपुल्लिङ्गस्य राजीवकेतनवश शब्दस्य द्वितियाविभक्ते: एकवचनान्तं पदमिदम् ।
रासि जीवति इति राजीव: । राजीव: केतन: यस्य स: राजीवकेतन: । राजीवकेतनस्य वश: राजीवकेतनवश: । तम् ।
सितवाजीशदैत्यतनुवाजीशभेदकरदो: - षकारान्तपुल्लिङ्गस्य सितवाजीशदैत्यतनुवाजीशभेदकरदोष् शब्दस्य सम्बोधनाविभक्ते: एकवचनान्तं पदमिदम् ।
वाजीनां ईश: वाजीश: । सित: च असौ वाजीश: च सितवाजीश: । दैत्यस्य तनु: दैत्यतनु: । सितवाजीशस्य दैत्यतनु: सितवाजीशदैत्यतनु: । भेदं करोति इति भेदकर: । सितवाजीशदैत्यतनुं वाजीश: सन् भेदकरौ दोषौ यस्य स: सितवाजीशदैत्यतनुवाजीशभेदकरदो: ।
जाजीकदम्बनवराजीवमुख्यसुमराजीसुवासितशिर: - सकारान्तपुल्लिङ्गस्य जाजीकदम्बनवराजीवमुख्यसुमराजीसुवासितशिरस् शब्दस्य सम्बोधनाविभक्ते: एकवचनान्तं पदमिदम् ।
नव: च असौ राजीव: च नवराजीव: । जाजि: च कदम्ब: च नवराजीव: च जाजीकदम्बनवराजीवा: । जाजीकदम्बनवराजीवा: च ते मुख्या: सुमा: जाजीकदम्बनवराजीवमुख्यसुमा: । जाजीकदम्बनवराजीवमुख्यसुमानां राजि: जाजीकदम्बनवराजीवमुख्यसुमराजि: । सुवासित: च असौ शिर: च सुवासितशिर: । जाजीकदम्बनवराजीवमुख्यसुमराजिभि: सुवासित: शिर: यस्य स: जाजीकदम्बनवराजीवमुख्यसुमराजीसुवासितशिर: ।
अन्वय: -
हे विदुराजीव - हे धृतराष्ट्र के मंत्री विदुर में प्रीति रखनेवाले
वाजी - घोडे
इभ - हाथी
पत्ति - पदसेना
नृप - राजाओं का झुंड जो
राजी - घोडों से बंधे हुए
रथ - रथों में
अन्वित - सवार करने वाले इन सब के साथ
जरा - जरा नाम की राक्षसी से
जीव - जीवन पानेवाले जरासंध के
गर्व - गर्व को
शमन - मिटानेवाले
वाजीश - गगन में जीवन करनेवाले पक्षियों के राजा गरुड पर
वाह - सवारी करने वाले,
सित - सफेद
वाजीश - घोडे के रूप में आये हुए
दैत्य - असुर के
तनु - शरीर को
वाजीश - सफेद घोडे के भेस में ही
भेदकर - भेद करनेवाले
दो: - भुजाओं वाले,
जाजी - मल्लिका
कदम्ब - कदंब
नव - अभी खिला हुआ
राजीव - कमल आदि
मुख्य - प्रमुख
सुमराजी - फूलों की राशी से
सुवासित - सुवासित या खुशबूदार
शिर: - शिर वाले
राजीव - कमल जैसे
नेत्र - आंखों वाले
श्रीकृष्ण - श्रीकृष्ण
राजीव - कमल को ही
केतन - ध्वज के रूप में धारण करने वाले काम देव के
वशम् - वश में गिरे हुए
माम् - मेरी
अवतु - रक्षा करें ।
हिंदी भाषा में अर्थ:
हे धृतराष्ट्र के मन्त्रि विदुर में प्रीति रखनेवाले, घोडे, हाथी, पादचारी, सामंत राजाओं के साथ आये, और घोडों से बंधे रथ पर विराजमान जरा नाम की राक्षसी का पुत्र जरासंध के गर्व का शमन या विनाश करने वाले, आकाश में उडकर जीनेवाले पक्षियों के स्वामी गरुड जी पर सवारी करनेवाले, सफेद बलशाली घोडे के समान दुष्ट राक्षस के शरीर को उस से भी बलवान घोडे के मुख और मनुष्य के शरीर धारण करके भगवान हयग्रीव बन के राक्षस के शरीर को भेद करने के भुजाओं वाले, मल्लिका, कदम्ब, ताजा उगे हुये कमल आदी प्रमुख पुष्पों के खुशबू से भरे सिर वाले कमल के जैसे विस्तार आंखोवाले भगवान श्रीकृष्ण जी, कमल के बाणों से तीर चलानेवाले काम देव के वश मे रहनेवाले मेरी रक्षा करें ।
क्रिस्ताब्द 1480 से 1600 तक भूमंडल पर विराजमान, आनेवाले कल्प में भगवान श्रीवायुदेव जी के पदवी को पानेवाले, माध्वधर्म के प्रमुख यतिश्रेष्ठ, श्रीहयवदन जी के महान उपासक, भक्तों के लिये कामधेनु और कल्पवृक्ष से भी बढकर सहायता करनेवाले श्रीमद्वादिराजतीर्थजी के वेदांतसाम्राज्य में विराजित हुए 500 वर्ष आज हुए हैं । इसी उपलक्ष में इन से विरचित "श्रीदशावतारस्तुती" नाम के 34 श्लोकों वाली स्तोत्रकाव्य का यह 26 वाँ श्लोक है ।
इस श्लोक में यतिश्रेष्ठ जी ने "अश्वधाटी" नाम के विशिष्ट छंद का उपयोग कर के सभी श्लोकों की रचना किया है ।इस छंद की विशेषता यह है कि इस श्लोक के हर पाद या चरण में 22 अक्षर हैं, हर चरण का दूसरा अक्षर "जी" है, तथा हर दूसरे अक्षर के बाद छः (6) अक्षरों बाद सातवाँ अक्षर ही चरण का दूसरा अक्षर है, जैसे की "राजीवनेत्र" शब्द में "जी" श्लोक के चरण में दूसरा आया, उसी तरह श्लोक के प्रथम पाद में "विदुराजीव" शब्द में उपयोग हुए "जी" अक्षर बिलकुल पहले "जी" सा छः (6) अक्षरों की दूरी पर है, और इसी तरह कविश्रेष्ठ ने सभी श्लोकों में अनुवर्तन किया है ।
इस तरह कोई भी त्रुटी रहित श्लोकों के उच्चारण, मनन, ध्यान, पारायण तथा अर्थानुसंधान करनेवाले भक्तों को इस श्लोक में उपयोग हुए व्याकरण नियमों की पुष्टी की तरह जीवन में आर्थिक, सांसारिक, मानसिक, दैहिक तथा पारमार्थिक पुष्टी अवश्य मिलता है । यह केवल किसी मनुष्य की रचना नहीं है, अपि तु एक ऋुजु देवता जो आगामी कल्पों में ब्रह्मदेव जी की पद पर नियुक्ती पानेवाले यतिवर्य के करकमलों से रचा गया है । ऐसे श्लोकों का मनन ही मन को आनंद करानेवाले होते हैं ।
ॐ नमो भगवते हयतुण्डाकृतिने ।।
ಕನ್ನಡ ಪ್ರತಿಪದಾರ್ಥ:
ಹೇ ವಿದುರಾಜೀವ - ಹೇ ಧೃತರಾಷ್ಟ್ರನಮಂತ್ರಿಯಾದ ವಿದುರನಲ್ಲಿ ಪ್ರೀತಿಯುಳ್ಳವನೇ,
ವಾಜಿ - ಕುದುರೆ
ಇಭ - ಆನೆ
ಪತ್ತಿ - ಪದಾತಿದಳ
ನೃಪ - ಅನೇಕ ರಾಜರುಗಳಿಂದಲೂ
ರಾಜೀ - ಕುದುರೆಗಳಿಂದ ಎಳೆಯಲ್ಪಡುವ
ರಥ - ರಥದಲ್ಲಿ
ಅನ್ವಿತ - ಕುಳಿತ
ಜರಾಜೀವ - ಜರಾ ಎಂಬ ರಕ್ಕಸಿಯಿಂದ ಜೀವ ಪಡೆದ ಜರಾಸಂಧನ
ಗರ್ವ - ಅಹಂಕಾರವನ್ನು
ಶಮನ - ನಾಶಗೊಳಿಸಿದವನೇ,
ವಾಜೀಶ - ಆಕಾಶದಲ್ಲಿ ಹಾರಾಡಿ ಬದುಕುವ ಪಕ್ಷಿಗಳ ರಾಜನಾದ ಗರುಡನ ಮೇಲೆ
ವಾಹ - ಸವಾರಿ ಮಾಡುವವನೇ
ಸಿತ - ಬಿಳಿ ಬಣ್ಣದ
ವಾಜೀಶ - ಕುದುರೆಯ ರೂಪವನ್ನು ತಾಳಿದ
ದೈತ್ಯ - ಅಸುರನ
ತನು - ಶರೀರವನ್ನು
ವಾಜೀಶ - ಶ್ರೇಷ್ಠಕುದುರೆಯ ಅವತಾರ ಧರಿಸಿ (ಹಯವದನನ ಅವತಾರ ಧರಿಸಿ)
ಭೇದಕರ - ಸೀಳಿಹಾಕಿದ
ದೋಃ - ತೋಳು ಅಥವಾ ಭುಜಗಳುಳ್ಳವನೇ,
ಜಾಜೀ - ಮಲ್ಲಿಗೆ
ಕದಂಬ - ಕದಂಬಪುಷ್ಪ ಅಥವಾ ಬಾಳೆಹೂವು
ನವ - ಆಗತಾನೇ ಅರಳಿದ
ರಾಜೀವ - ನೀರಲ್ಲಿ ಹುಟ್ಚುವ ಕಮಲದ ಪುಷ್ಪವೇ
ಮುಖ್ಯ - ಮೊದಲಾದ
ಸುಮರಾಜೀ - ಪುಷ್ಪಗಳ ರಾಶಿಯಿಂದ
ಸುವಾಸಿತ - ಗಮಗಮಿತವಾದ (ಸುವಾಸಿತವಾದ)
ಶಿರಃ - ತಲೆಯುಳ್ಳವನೇ
ರಾಜೀವ - ಕಮಲದಂತಹ
ನೇತ್ರ - ಕಣ್ಣುಳ್ಳ
ಶ್ರೀಕೃಷ್ಣ - ಶ್ರೀಕೃಷ್ಣನೇ
ರಾಜೀವ - ಕಮಲಪುಷ್ಪವನ್ನೇ
ಕೇತನ - ಧ್ವಜವಾಗಿ ಉಳ್ಳ ಕಾಮದೇವನ
ವಶಮ್ - ವಶನಾದ
ಮಾಮ್ - ನನ್ನನ್ನು
ಅವತು - ರಕ್ಷಿಸು.
ವಿವರಣೆ:
ಹೇ ಧೃತರಾಷ್ಟ್ರನ ಮಂತ್ರಿಯಾದ ವಿದುರನಲ್ಲಿ ಜೀವವನ್ನು (ಪ್ರೀತಿಯನ್ನು) ಉಳ್ಳವನೇ, ಕುದುರೆ, ಆನೆ, ಪದಾತಿದಳ, ಸಾಮಂತರಾಜರುಗಳಿಂದ ಯುಕ್ತನಾದ, ಕುದುರೆಗಳಿಂದ ಎಳೆಯಲ್ಪಡುವ ರಥದಲ್ಲಿ ಕುಳಿತ, ಜರೆ ಎಂಬ ರಾಕ್ಷಸಿಯಿಂದ ಜೀವಗೊಳಿಸಲ್ಪಟ್ಟ ಜರಾಸಂಧನೆಂಬ ರಾಕ್ಷಸನ ಗರ್ವವನ್ನು ಮುರಿದವನೇ, ಆಕಾಶದಲ್ಲಿ ಹಾರಾಟವನ್ನು ಮಾಡಿ ಬದುಕುವ ಪಕ್ಷಿಗಳ ರಾಜನಾದ ಗರುಡನನ್ನೇ ವಾಹನವಾಗಿ ಉಳ್ಳವನೇ, ಬಿಳಿಯ ಬಣ್ಣದ ದೈತ್ಯಾಕಾರದ ಕುದುರೆಯ ಆಕಾರವನ್ನು ಉಳ್ಳ ರಾಕ್ಷಸನ ದೇಹವನ್ನು ಕುದುರೆಯ ಮುಖವನ್ನು ಮತ್ತು ಮನುಷ್ಯನ ಶರೀರವನ್ನು ಹೊಂದಿದ ಹಯವದನನೆಂಬ ಅವತಾರವನ್ನು ಮಾಡಿ ದೈತ್ಯನ ಶರೀರವನ್ನು ಭೇದಿಸಿದ ತೋಳುಗಳುಳ್ಳವನೇ, ಜಾಜಿ, ಕದಂಬ, ತಾಜಾ ಕಮಲದ ಹೂಗಳೇ ಮುಂತಾದ ಹೂಗಳ ಸುವಾಸನೆಯುಳ್ಳ ತಲೆಯನ್ನು ಉಳ್ಳವನಾದ, ಕಮಲದಂತೇ ಅಗಲವಾದ ಕಣ್ಣುಗಳುಳ್ಳ ಶ್ರೀಕೃಷ್ಣನೇ, ಕಮಲಧ್ವಜನೆಂದು ಪ್ರಸಿದ್ಧನಾದ ಕಮಲದ ಹೂವನ್ನೇ ಬಾಣವಾಗಿ ಉಳ್ಳ ಕಾಮದೇವನ ವಶನಾದ ನನ್ನನ್ನು ರಕ್ಷಿಸು.
ಕ್ರಿ. ಶ. 1480 ರಿಂದ ೧೬೦೦ ರ ವರೆಗೆ ಕಲಿಯುಗದ ಮನುಷ್ಯನ ಪರಿಪೂರ್ಣ ಆಯಸ್ಸಾದ೧೨೦ ವರ್ಷಗಳ ಕಾಲದವರೆಗೆ ಮಧ್ವ ವಿಜಯದುಂದುಭಿಯನ್ನು ಬಾರಿಸಿದ, 100 ಜನ ಋಜುದೇವತೆಗಳ ಸಾಲಿನಲ್ಲಿ "ಲಾತವ್ಯ" ರೆಂಬ ಮೂರನೇ ಋಜುಗಳಾದ, ಶ್ರೇಷ್ಠಯತಿಗಳೂ, ಕವಿಗಳೂ, ವಾದಿಗಳೂ, ಸಂಸ್ಕೃತಪಂಡಿತರೂ, ಎಲ್ಲಕ್ಕೂ ಮುಖ್ಯವಾಗಿ ಶ್ರೀ ಹಯವದನ ದೇವರ ಪರಮೋಪಾಸಕರೂ ಆದ ಶ್ರೀಮದ್ವಾದಿರಾಜತೀರ್ಥರ ಕರಕಮಲಗಳಿಂದ ವಿರಚಿತವಾದ"ದಶಾವತಾರಸ್ತುತಿ" ಯ ೨೬ ನೇ ಶ್ಲೋಕವಿದು. ಶ್ಲೋಕಗಳು ಸಂಸ್ಕೃತಭಾಷೆಯಲ್ಲಿ ಹೇರಳವಾಗಿ ಇವೆ. ಆದರೆ ಯತಿಶ್ರೇಷ್ಠರ ಈ ಸ್ತೋತ್ರಕಾವ್ಯವು ಎಂತಹ ಸಾರರಹಿತ ಹೃದಯವನ್ನು ಹೊಂದಿದ ವ್ಯಕ್ತಿಯೇ ಆಗಿರಲಿ, ಅವನನ್ನು ಭಕ್ತಿಮಾರ್ಗಕ್ಕೆ ಎಳೆದೊಯ್ಯುತ್ತದೆ. ಕಾರಣ ಈ ಶ್ಲೋಕದಲ್ಲಿ ಅಡಗಿರುವ ವ್ಯಾಕರಣಾದಿ ಸತ್ವಗಳ ಪರಿಪೂರ್ಣತೆ.
ಹೌದು. ಈ ಸ್ತೋತ್ರಕಾವ್ಯದ ಎಲ್ಲ 34 ಶ್ಲೋಕಗಳಲ್ಲೂ ಯತಿವರ್ಯರು ಅತ್ಯಂತ ಕಠಿಣತಮ ಛಂದಸ್ಸಾದ "ಅಶ್ವಧಾಟೀ" ಎಂಬ ಛಂದಸ್ಸಿನ ಉಪಯೋಗವನ್ನು ಮಾಡಿದ್ದಾರೆ. ಹಯವದನದೇವರ ಅನುಗ್ರಹಕ್ಕೆ ಪರಿಪೂರ್ಣವಾಗಿ ಪಾತ್ರರಾಗಿದ್ದಾರೆ. "ಜೀ" ವರ್ಣವು ಇಲ್ಲಿ ಈ ಶ್ಲೋಕದ ನಾಲ್ಕೂ ಚರಣಗಳಲ್ಲೂ 2 ನೇ ಅಕ್ಷರವಾಗಿದೆ. ಹಾಗೆಯೇ ಈ ಶ್ಲೋಕದ ಪ್ರತಿಯೊಂದು ಚರಣದಲ್ಲೂ 22 ಅಕ್ಷರಗಳಿರುವುದನ್ನು ಗಮನಿಸಿ. ಇನ್ನೂ ಮುಂದೆ ಯೋಚಿಸಿ ನೋಡಿದಾಗ ಪ್ರತೀ ಪಾದದಲ್ಲಿ 2 ನೇ ಅಕ್ಷರದಿಂದ 6 ಅಕ್ಷರಗಳನ್ನು ಬಿಟ್ಟು 7 ನೇ ಅಕ್ಷರವು ಎರಡನೇ ಅಕ್ಷರವೇ ಆಗಿರುತ್ತದೆ.. ಉದಾಹರಣೆಗೆ "ರಾಜೀವನೇತ್ರ" ಎಂಬ ಪ್ರಥಮ ಪಾದದ ಪ್ರಥಮ ಶಬ್ದದ ಎರಡನೇ ಅಕ್ಷರ "ಜೀ", ಮುಂದೆ ಇದೇ ಪಾದದ "ವಿದುರಾಜೀವ" ಎಂಬಲ್ಲಿ "ಜೀ" ಅಕ್ಷರವು 6 ಅಕ್ಷರಗಳ ನಂತರ ಬಂದಿದೆ. ಹಾಗೆಯೇ "ರಾಜೀವಕೇತನವಶಮ್" ಎಂಬಲ್ಲೂ ಇರುವ "ಜೀ" ಅಕ್ಷರವು 6 ಅಕ್ಷರಗಳ ನಂತರವೇ ಬಂದಿದೆ. ಇಂತಹ ಲಯಬದ್ಧವೂ, ವ್ಯಾಕರಣಬದ್ಧವೂ, ಶ್ರುತಿಬದ್ಧವೂ, ಭಗವದ್ಗುಣಬದ್ಧವೂ ಹಾಗೂ ಭಕ್ತಿಬದ್ಧವೂ ಆದ ಶ್ಲೋಕಗಳ ಪಾರಾಯಣವೇ ಮುಕ್ತಿದಾಯಕ. ಇಂತಹ ಸ್ತೋತ್ರಗಳ ರಚನೆ ಕೇವಲ ದೈವಪ್ರೇರಣೆಯಿಂದಲೇ ಮಾತ್ರ ಸಾಧ್ಯ. ಇಲ್ಲಿ "ಜೀ" ಎಂಬ ವರ್ಣವು ಪ್ರತಿ ಪಾದದಲ್ಲಿಯೂ ಪುನರುಪಯೋಗವಾಗಿದ್ದರಿಂದ ಈ ಶ್ಲೋಕದಲ್ಲಿ "ಶ್ಲೇಷಾಲಂಕಾರ"ವಿದೆ.
ಓಂ ನಮೋ ಭಗವತೇ ಹಯತುಂಡಾಕೃತಿನೇ ||

No comments:
Post a Comment