Wednesday, May 3, 2017

ಸತ್ಯ ಮತ್ತು ಸುಳ್ಳು

ಹೀಗೊಂದು ಕಥೆ
ಒಮ್ಮೆ ಸತ್ಯ ಸುಳ್ಳು ಎರಡೂ ವಾಕಿಂಗ್ ಹೋಗಿದ್ವು. ಹಾದಿಯಲ್ಲಿ ಒಂದು ಸುಂದರ ನದಿ ಕಂಡಿತು . ಸರಿ ಎರಡೂ ತಮ್ಮ ವಸ್ತ್ರಗಳನ್ನ ತೆಗೆದು ಸ್ನಾನಕ್ಕೆ ಇಳಿದವು .

 ಸುಂದರ ಸಂಜೆಯಲ್ಲಿ ತಂಪಾದ ನದಿಯಲ್ಲಿ ಈಜುತ್ತಾ ಮೈ ಮರೆತವು . ಒಂದಷ್ಟು ಹೊತ್ತಾದ ಮೇಲೆ ಸುಳ್ಳು ಮೇಲೆದ್ದು ಬಂತು. ಸತ್ಯ ಇನ್ನೂ ಮೈ ಮರೆತು ಈಜುತ್ತಾ ಇತ್ತು .

ಸುಳ್ಳು ಅತ್ತಿತ್ತ ನೋಡಿ ಸತ್ಯದ ಬಟ್ಟೆಗಳನ್ನ ಧರಿಸಿ ಹೊರಟು ಬಿಟ್ಟಿತು. ಸಾಕಷ್ಟು ಸಮಯದ ನಂತರ ಸತ್ಯ ಮೇಲೆದ್ದು ಬಂದಾಗ ಅದರ ವಸ್ತ್ರಗಳೇ ಇರಲಿಲ್ಲ .

ಸತ್ಯಕ್ಕೆ ಸುಳ್ಳಿನಧಿರಿಸು ಧರಿಸಲು ಹಿಂಸೆಯೆನಿಸಿತು, ಅಸಹ್ಯ ಎನಿಸಿತು ಅಂದಿನಿಂದ ಸತ್ಯ ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು .

ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ. ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು .

ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ .....

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...