Wednesday, May 3, 2017

ಕೈಲಾಸ ಟೆಂಪಲ್ ಕೆತ್ತಿದ್ದು ಅನ್ಯಗ್ರಹದವರಾ ನಮ್ಮ ಜನರಾ ?

ಕೈಲಾಸ ಟೆಂಪಲ್ ಕೆತ್ತಿದ್ದು ಅನ್ಯಗ್ರಹದವರಾ ನಮ್ಮ ಜನರಾ ? -

ಈ  ಕೈಲಾಸ್ ಟೆಂಪಲ್

(ಔರಂಗಾಬಾದ್,ಎಲ್ಲೋರಾ)ಅಥವಾ ಕೈಲಾಸನಾಥ ದೇವಾಲಯ 8 ನೇ ಶತಮಾನದಲ್ಲಿ ಶ್ರೀ ಕ್ರಿಷ್ಣ ನ ನಿರ್ಮಾಣ ಎಂಬ ಇತಿಹಾಸವಿದೆ. ಈ ದೇವಸ್ಥಾನವು ಎಲ್ಲ ದೇವಸ್ಥಾನಗಳಂತೆ ಪಾಯತೆಗೆದು ಬುಡದಿಂದ ಕಟ್ಟಿರುವುದಲ್ಲ ಅತೀ ದೊಡ್ಡದಾದ ಒಂದು ಕಲ್ಲಿನ ಬೆಟ್ಟವನ್ನು ಆರಿಸಿಕೊಂಡು ದೇವಸ್ಥಾನದ (ಮೇಲ್ಭಾಗದಲ್ಲಿರುವ ಕಳಸ)ಮೇಲಿನಿಂದ ಕೆತ್ತನೆ ಶುರು ಮಾಡಿ ತಳ ಮಟ್ಟಕ್ಕೆ ಪೂರ್ಣಗೊಳಿಸಿರುವುದು ,ಒಂದು ಸಂಪೂರ್ಣ ಕಲ್ಲಿನ ಬೆಟ್ಟದ ಮದ್ಯದಲ್ಲಿ ಈ ರೀತಿ ಕೆತ್ತನೆ ಮಾಡುವುದು ಅದ್ಭುತವಾಗಿದೆ .

ಈ ದೇವಸ್ಥಾನ ಕೇವಲ 18 ವರ್ಷಗಳಲ್ಲಿ ತಯಾರಾಗಿರಲು ಆಗದು ಕನಿಷ್ಟ 100 ವರ್ಷಗಳ  ಅವಧಿಯಲ್ಲಿ ನಿರ್ಮಿತವಾಗಿರಬಹುದು ಎಂಬುದು ಆಗಿನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತು,ಆಯುಧ,ಉಪಕರಣಗಳ ಬಗ್ಗೆ ಯೋಚಿಸಿ ಪ್ರಖ್ಯಾತ ಎಂಜಿನೀಯರ್ ಗಳು ತಿಳಿಸಿರುವ ವಿಚಾರವಿದು .

ಆದರೆ ಇಷ್ಟು ಕೆಲಸಕ್ಕೆ ಏನಿಲ್ಲವೆಂದರೂ 400,000 ಟನ್ನಿನಷ್ಟು ಕಲ್ಲನ್ನು ಕೆತ್ತಿ ತೆಗೆದು ಹಾಕುವುದು ಸಾದ್ಯವಾ ಅದೂ ಕೇವಲ 18 ವರ್ಷಗಳಲ್ಲಿ  ಹ್ಹ ಹ್ಹ ಹ್ಹ ಈ ಲೆಕ್ಕಾಚಾರದಲ್ಲಿ ಕೆಲಸ ಮಾಡಿದರೆ ಗಂಟೆಗೆ ಏನಿಲ್ಲವೆಂದರೂ 5 ಟನ್ನಿನಷ್ಟು ಕಲ್ಲನ್ನು ಕೆತ್ತಿಹಾಕಬೇಕಾಗುತ್ತದೆ ಈ ಕನಿಷ್ಟ ಅವಧಿಯಲ್ಲಿ ಕೆತ್ತಿ ಹಾಕುವುದಿರಲಿ ಕೆತ್ತಿರುವ 5  ಟನ್ ಕಲ್ಲನ್ನು ಎತ್ತಿ ಹಾಕುವುದೂ ಸಹ ಸಾದ್ಯವಾಗದು.

ಅದಲ್ಲದೇ ದೀಪಕ್ ಶಿಮ್ಕೋಡಾ ಪ್ರೊಫೆಸರ್ ಪ್ರಕಾರ ಈ ಕಲ್ಲನ್ನು ಕೆತ್ತಿಯೇ ನಿರ್ಮಿಸಿದ್ದಾರೆ ಎಂಬುದಕ್ಕೆ ಇದುವರೆಗೂ ದೇವಸ್ಥಾನದ ಅಕ್ಕಪಕ್ಕ ಯಾವುದೇ ಕಲ್ಲಿನ ಚೂರುಗಳ ಕುರುಹು ದೊರಕಿಲ್ಲ.
ಈಗಿರುವ ಹೊಸ ವಿಚಾರವೇನೆಂದರೆ ಈ ಕೈಲಾಸ ಟೆಂಪಲನ್ನು (ಏಲಿಮನ್ಸ್)ಅನ್ಯಗ್ರಹ ಜೀವಿಗಳು ಹೊರಗಿನಿಂದ ಬಂದು ಲೇಸರ್ ಮಾದರಿಯ ಯಂತ್ರದ ಸಹಾಯದಿಂದಲೇ ಇದನ್ನು ನಿರ್ಮಿಸಿರಬಹುದಾ ಎಂದು ಏಕೆಂದರೆ ಒಂದು ಕಲ್ಲಿನಲ್ಲಿ ಕೆತ್ತನೆ ಮಾಡುವಾಗ ಸ್ವಲ್ಪ ಮುಕ್ಕಾದರೂ ಸಹ ಅದನ್ನು ಬಿಸುಟು ಬೇರೊಂದು ಕಲ್ಲಿನಲ್ಲಿ ಮತ್ತೆ ಕೆತ್ತಿರುವ ಸಾದ್ಯತೆಗಳು ಇತಿಹಾಸದಲ್ಲಿದೆ.

ಆದರೆ ಒಂದೇ ದೊಡ್ಡ ಕಲ್ಲಿನಲ್ಲಿ ಅದೂ ಮೇಲ್ಭಾಗದಿಂದ ಕೆಳಗಿನೆಡೆಗೆ ಮುಕ್ಕಾಗದಂತೆ ದೇವಸ್ಥಾನವನ್ನು ನಿರ್ಮಿಸುವುದೆಂದರೆ ಸುಲಭದ ಮಾತೇ.ನಾವು ನಿರ್ಮಿಸಿದ್ದರೆ ಭಕ್ತಿ ಅಥವಾ ಕಲಾಕೌಶಲ್ಯ ಎಂದು ಸಂತೋಷಪಡೋಣ ಆದರೆ ಏಲಿಯನ್ಸಗಳಿಗೆ ಇದನ್ನು ನಿರ್ಮಿಸುವ ಹುಚ್ಚು ಏಕೆ ಬಂತು ಹಾಗೂ ನಿರ್ಮಿಸಿದ್ದರೆ 8 ನೇ ಶತಮಾನದಲ್ಲಿಯೇ ಅದಾವ ಯಂತ್ರವಿತ್ತು ಅವರ ಬಳಿ ಎಂಬುದು ಯೋಚಿಸಬೇಕಾದ ವಿಚಾರವೇ ಸರಿ.
(ಸಂಗ್ರಹಿಸಿದ್ದು)

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...