Wednesday, May 3, 2017

ಅಂಧವಿಶ್ವಾಸ Vs ಲಾಜಿಕ್‌

* ಸ್ಮಶಾನದಿಂದ ಬಂದ ಮೇಲೆ ಸ್ನಾನ ಮಾಡೋದು

ಅಂಧವಿಶ್ವಾಸ : ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಲಾಜಿಕ್‌ : ಹಿಂದೆ ಹೆಪಟೈಟೀಸ್‌, ಸ್ಮಾಲ್‌ ಪಾಕ್ಸ್‌ ಮೊದಲಾದ ರೋಗಗಳಿಗೆ ಚಿಕಿತ್ಸೆ ಇರಲಿಲ್ಲ. ಆವಾಗ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮೇಲೆ ಸ್ನಾನ ಮಾಡುತ್ತಿದ್ದರು. ಯಾಕೆಂದರೆ ಡೆಡ್‌ ಬಾಡಿಯಲ್ಲಿರುವ ಯಾವುದೇ ಕೀಟಾಣು ತಮಗೆ ಸಮಸ್ಯೆ ನೀಡದೇ ಇರಲಿ ಎಂದು.
--------------------------
* ಕೊಳದಲ್ಲಿ ನಾಣ್ಯಗಳನ್ನು ಹಾಕುವುದು

ಅಂಧವಿಶ್ವಾಸ : ಭಾಗ್ಯ ಹೆಚ್ಚಾಗುತ್ತದೆ

ಲಾಜಿಕ್‌ : ಮೊದಲು ತಾಮ್ರದ ನಾಣ್ಯಗಳು ದೊರೆಯುತ್ತಿತ್ತು. ತಾಮ್ರದ ವಸ್ತುಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಆದುದರಿಂದ ಅದನ್ನು ನೀರಿಗೆ ಹಾಕುತ್ತಿದ್ದರು. ಅಲ್ಲದೇ ತಾಮ್ರ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕ ತತ್ವವನ್ನು ಸಹ ನೀಡುತ್ತದೆ.
-------------------------------
* ಎಲ್ಲಿಯಾದರು ಹೋಗುವಾಗ ಮೊಸರು ತಿನ್ನೋದು

ಅಂಧವಿಶ್ವಾಸ : ಭಾಗ್ಯ ನಿಮ್ಮ ಜೊತೆ ಇರುತ್ತದೆ.

ಲಾಜಿಕ್‌ : ಬೇಸಿಗೆ ಕಾಲದಲ್ಲಿ ಮೊಸರು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೇ ಮೊಸರಿನ ಜೊತೆ ಸಕ್ಕರೆ ಬೆರೆಸಿ ತಿನ್ನೋದ್ರಿಂದ ದೇಹಕ್ಕೆ ಗ್ಲೋಕೋಸ್‌ ದೊರೆಯುತ್ತದೆ.
-------------------------------------------
* ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯಬಾರದು

ಅಂಧವಿಶ್ವಾಸ : ಕೆಟ್ಟ ಸಮಯ ಆರಂಭವಾಗುತ್ತದೆ.

ಲಾಜಿಕ್‌ : ಹಿಂದಿನ ಕಾಲದಲ್ಲಿ ನೀರನ್ನು ಉಳಿಸುವ ಸಲುವಾಗಿ ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯದೇ ಇರುತ್ತಿದ್ದರು.
--------------------------
* ಬಾಗಿಲಿನಲ್ಲಿ ಲಿಂಬೆ ಮತ್ತು ಮೆಣಸು ಕಟ್ಟುವುದು

ಅಂಧವಿಶ್ವಾಸ : ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗಲು

ಲಾಜಿಕ್‌ : ನಿಂಬೆ ಮತ್ತು ಮೆಣಸಿನಲ್ಲಿರುವ ಸಿಟ್ರಿಕ್‌ ಆ್ಯಸಿಡ್‌ನಿಂದಾಗಿ ಮನೆಯ ಒಳಗೆ ಕೀಟಾಣುಗಳು ಬರದಂತೆ ತಡೆಯುತ್ತದೆ.
--------------------------
* ಗ್ರಹಣದ ಸಮಯದಲ್ಲಿ ಹೊರಗೆ ಹೋಗದೇ ಇರೋದು

ಅಂಧವಿಶ್ವಾಸ : ರಾಹುವಿನ ಪ್ರಭಾವ

ಲಾಜಿಕ್‌ : ಸೂರ್ಯ ಗ್ರಹಣದ ಸಂದರ್ಭ ಬರೀ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ.
--------------------------
* ಮಂದಿರದಲ್ಲಿ ಗಂಟೆ ಭಾರಿಸುವುದು

ಅಂಧವಿಶ್ವಾಸ : ಗಂಟೆ ಭಾರಿಸುವುದರಿಂದ ದೇವರಿಗೆ ಸಂತೋಷವಾಗುತ್ತದೆ.

ಲಾಜಿಕ್‌ : ಗಂಟೆ ಬಡಿದ ಮೇಲೆ ಉಂಟಾಗುವ ವೈಬ್ರೇಶನ್‌ನಿಂದಾಗಿ ನಮ್ಮ ದೇಹದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಮನಸ್ಸು ಕೇಂದ್ರೀಕೃತವಾಗಲು ಸಹಾಯಕವಾಗುತ್ತದೆ.
(ಸಂಗ್ರಹಿಸಿದ್ದು)

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...